ಶುಭವಾಗಲಿ ಮಕ್ಕಳೇ ಕರೋನದ ನಡುವೆ ಬಂದ ಪರೀಕ್ಷೆ ಎಂಬ ಅಗ್ನಿ ದಿವ್ಯವನ್ನು ಯಶಸ್ವಿಯಾಗಿ ಎದುರಿಸಿ ಯಶೋವಂತರಾಗಿ
ಪರೀಕ್ಷಾ ಸಲಹೆಗಳು ವಿಡಿಯೋ ಮೂಲಕ ನಿಮಗಾಗಿ
ಬನ್ನಿ ಹತ್ತರ ಮಕ್ಕಳೇ
ಪರೀಕ್ಷಾ ಕೇಂದ್ರದ ಹತ್ತಿರ
ಸಾನಿಟೈಸ್ ಆಗಿವೆ ಕೊಠಡಿಗಳು
ವ್ಯಾಕ್ಸಿನ್ ಪಡೆದಿಹರು ಸಿಬ್ಬಂದಿಗಳು
ದಿಗಿಲೇತಕೆ?
ಮುಖಕ್ಕೆ ಮಾಸ್ಕ್ ಇರಲಿ
ಸುರಕ್ಷಿತ ಅಂತರ ನಡುವಿರಲಿ
ಮಿದುಳಿಗೆ ಮಾಸ್ಕ್ ತೊಡಿಸುವುದು ಬೇಡ
ಯೋಚಿಸದೆ ಉತ್ತರಿಸುವುದು ಬೇಡವೇ ಬೇಡ
ಓ ಹತ್ತರ ಮಕ್ಕಳೇ
ಬನ್ನಿ ಪರೀಕ್ಷಾ ಕೇಂದ್ರದ ಹತ್ತಿರ
ಪ್ರಶ್ನೆ ಸಂಖ್ಯೆಗಳ OMR ಗಳ ಹೋಲಿಸಿ
ಒಂದು ಪ್ರಶ್ನೆಗೆ ಒಮ್ಮೆ ಉತ್ತರಿಸಿ.
ಓ ಹತ್ತರ ಮಕ್ಕಳೇ
ಇಳೆಯ ತುಂಬಾ ಮಳೆ ಇರಬಹುದು
ಸವೆಯುವ ದಾರಿ ದೂರವಿರಬಹುದು
ಮನಸಿನಲಿ ಅಂತರ ಹತ್ತಿರವಿರಲಿ
ಕರೋನ ಭಯವ ಮರೆತು ಬಿಡಲಿ
ನಪಾಸಿನ ಅಪಜಯದ ಚಿಂತೆಯೇ ಇಲ್ಲ ನಮ್ಮಲಿ
ಆದರೆ ಓದಿ ದಣಿದ ಮನಕೆ
ಬೇಕಲ್ಲ ಚೇತರಿಕೆ?
ಹಿಂದಿನ ರಾತ್ರಿ ಇರಲಿ ವಿಶ್ರಾಂತಿ
ಆಗ ನಲವತ್ತೂ ನಿಮಗೆ ಸಂಪ್ರಾಪ್ತಿ
ಮುಂದಡಿ ಇಡಿ ಹಿಡಿ ಹಿಡಿಯಲಿ ಅಂಕಗಳ ಇಡಿ
ಪ್ರಯತ್ನಕೆ ಜಯವಂಜಿ ಜತೆಗೂಡದೇ ?
ಜಯವಿರಲಿ ನಿಮಗೆ
ಓ ಹತ್ತರ ಮಕ್ಕಳೇ ಬನ್ನಿ
ಪರೀಕ್ಷಾ ಕೇಂದ್ರದ ಹತ್ತಿರ
ರಾಮಚಂದ್ರಭಟ್ ಬಿ.ಜಿ
1
No comments:
Post a Comment