new tab editing

SCROLING TEXT

ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಮನವಿ:ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. 1) ಕಡ್ಡಾಯವಾಗಿ ಮಾಸ್ಕ್ ಧರಿಸಿ. 2) ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ. 3) ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ. 4) ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5) ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6) ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ. 7) ಪ್ರತಿದಿನ ಮಾಸ್ಕ್ ಬಳಸಿದ ನಂತರ ಬಿಸಿನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ.PREVENTION IS BETTER THAN CURE . Attention : Get resources from menu-> Science > Pariksha kirana-22-23> .

Thursday, July 22, 2021

ಆತ್ಮೀಯ ವೃತ್ತಿಬಾಂಧವರೇ,

ಶೀಘ್ರದಲ್ಲೇ ನಿರೀಕ್ಷಿಸಿ. 8 ಮತ್ತು 9 ನೇ ತರಗತಿಗಳ ಉಚಿತ ನೋಟ್ಸ್

57 ದಿಗಳವರೆಗೆ ಪರೀಕ್ಷಾಕಿರಣ,  ತದನಂತರ ರಾಜ್ಯಸಂಪನ್ಮೂಲ ವ್ಯಕ್ತಿಗಳ ತಂಡ ರೋಟರಿ ಸಹಯೋಗದಲ್ಲಿ ಜ್ಞಾನ ಸಿಂಚನ ಗಣಿತ ವಿಜ್ಞಾನ ವಿಷಯಗಳ ಉಚಿತ ಪುನರ್ಮನನ ತರಗತಿಗಳನ್ನು 15 ದಿಗಳವರೆಗೆ ನಡೆಸಿಕೊಟ್ಟೆವು. ವಿದ್ಯಾರ್ಥಿಗಳು, ಪೋಷಕರು ಹಾಗೂ ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾದ ಈ ಕಾರ್ಯಕ್ರಮ ನಮ್ಮ ಇಲಾಖಾ ಅಧಿಕಾರಿಗಳಿಂದಲೂ ಪ್ರಶಂಸೆಗೊಳಗಾಯಿತು. ಡಿ.ಎಸ್.ಇ ಆರ್ ಟಿ ಯ  ಮಾನ್ಯ ನಿರ್ದೇಶಕರಾದ ಮಾರುತಿ ಸರ್ ಹಾಗೂ ಸಹನಿರ್ದೇಶಕರಾದ ರತ್ನಯ್ಯ ಸರ್ ಅಷ್ಟೇ ಅಲ್ಲದೇ ಅನೇಕ ಬಿ.ಇ.ಓ/ ಇ ಓ ಹಾಗೂ ಇನ್ನಿತರ ಅಧಿಕಾರಿಗಳು ತರಗತಿಗಳ ಸಂದರ್ಭದಲ್ಲಿ ನಮ್ಮೊಂದಿಗಿದ್ದು ಪ್ರೋತ್ಸಾಹದ ನುಡಿಗಳನ್ನು ನುಡಿದಿರುವುದನ್ನು ಮರೆಯುವಂತಿಲ್ಲ. ಖ್ಯಾತ ಶಿಕ್ಷಣ ತಜ್ಞರಾದ ಡಾ. ಬಾಲಕೃಷ್ಣ ಅಡಿಗರು ಹಾಗೂ ಡಾ. ಹೆಚ್.ಎಸ್. ಗಣೇಶಭಟ್ಟರ  ಮಾರ್ಗದರ್ಶನದಲ್ಲಿ ನಮ್ಮ ತಂಡ ಯಶಸ್ವಿಯಾಗಿ ವಿದ್ಯಾರ್ಥಿಗಳ ಯಶಸ್ಸನ್ನು ಹೊರತು ಪಡಿಸಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಶ್ರಮವಹಿಸದ್ದು ಸ್ತುತ್ಯರ್ಹ.  ವಿಶೇಷವಾಗಿ ಎರಡೂ ವಿಷಯಗಳಲ್ಲಿ 80 ಅಂಕಗಳಿಗೆ 80 ಅಂಕಗಳ ಎಲ್ಲಾ ಪ್ರಶ್ನೆಗಳನ್ನೂ ನಮ್ಮ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಚರ್ಚಿಸಿದ್ದು ಇದಕ್ಕಾಗಿ ನಮ್ಮೆಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. 

ಈಗ ತಂಡದ ಸದಸ್ಯರುಗಳ ಒತ್ತಾಸೆಯ ಅಪೇಕ್ಷೆಯಂತೆ ಇನ್ನಷ್ಟು ಸ್ನೇಹಿತರ ಸಹಕಾರದೊಂದಿಗೆ ಗಣಿತ ವಿಜ್ಞಾನ ವಿಷಯಗಳಲ್ಲಿ  8 ಮತ್ತು 9ನೇ ತರಗತಿಯ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಉಚಿತ ಪ್ರಶ್ನೋತ್ತರಗಳು, ಚಟುವಟಿಕೆ ಹಾಳೆಗಳು, ವಿಡಿಯೋ ಲಿಂಕ್‍ಗಳು , ಸಿಮ್ಯುಲೇಷನ್‍ಗಳುಳ್ಳ ಏಕರೂಪದ ಸಂಪನ್ಮೂಲಗಳನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ಇಲಾಖೆಯ ಶಿಕ್ಷಣ ತಜ್ಞರುಗಳ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿ ಒಂದೇ ವೇದಿಕೆಯಲ್ಲಿ ಒದಗಿಸಿ ಕೊಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ.

ಎಂದಿನಂತೆ ನಿಮ್ಮ ಸಕ್ರಿಯ ಸಲಹೆಗಳ ನಿರೀಕ್ಷೆಯಲ್ಲಿ

 

 

1 comment:

Featured Post

2024-25 Model paper link

  https://notebooklm.google.com/?_gl=1*6lm8lw*_ga*NDY2Nzc3MDguMTczNjMzMzA5Mw..*_ga_W0LDH41ZCB*MTczNjMzMzA5Mi4xLjEuMTczNjMzMzA5Mi42MC4wLjA....