ಮೆಲುನುಡಿಯ ವಿಜ್ಞಾನಿ ಡಾ|| ಸಿ.ಆರ್. ಸತ್ಯರವರೊಂದಿಗಿನ ನೆನಪುಗಳು
ಆಚೆ ಮನೆಯ ಸುಬ್ಬಮ್ಮನಿಗೆ ಏಕಾದಶಿ ಉಪವಾಸ
ಎಲ್ಲೊ ಸ್ವಲ್ಪ ತಿಂತಾರಷ್ಟೇ ಉಪ್ಪಿಟ್ಟು ಅವಲಕ್ಕಿ ಪಾಯಸ ||
ಮೂರೋ ನಾಲ್ಕೋ
ಬಾಳೆಹಣ್ಣು ಸ್ವಲ್ಪ
ಚಕ್ಕುಲಿ ಕೋಡುಬಳೆ
ಘಂಟೆಗೆ ಎರಡೆ
ಸೀಬೆ ಹಣ್ಣು .....................
ವಿಜ್ಞಾನಿಗಳ ಬದುಕಿನ ಬಗ್ಗೆ ಹೇಳ ಹೊರಟವನು ಹೀಗೆಲ್ಲಿ ದಾರಿ ತಪ್ಪಿದೆ ಎಂದು ಅಂದುಕೊಂಡಿರಾ? ಬಾಲ್ಯದ ನೆನಪಾಯ್ತೇ ? ವಿಜ್ಞಾನಕ್ಕೂ, ವಿಜ್ಞಾನಿಗಳ ಬದುಕಿಗೂ ಬಾಲ್ಯದಲ್ಲಿ ಹಾಡುತ್ತಾ ಕುಣಿದ ಈ ಹಾಡಿಗೂ ಏನು ಸಂಬಂಧ? ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯಾ? ಅಂತ ಯೋಚಿಸುತ್ತಿದ್ದೀರಾ?