ನುಡಿಮುತ್ತುಗಳು
"ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ, ಇಂದಲ್ಲ ನಾಳೆ ಫಲ ನೀಡುತ್ತದೆ."
"ನಿಮ್ಮ ಗುರಿಯನ್ನು ಕೇಳಿ ಜನ ನಿನ್ನನ್ನು ಒಮ್ಮೆ ಹುಚ್ಚ ಎನ್ನಬೇಕು.
ನೀನು ಸಾಧಿಸಿದ ಮೇಲೆ ಅವರು ಹುಚ್ಚರಾಗಬೇಕು."
"ನಿದ್ದೆಯಲ್ಲಿ ಕಾಣುವಂತಹುದು ಕನಸಲ್ಲ,
ನಿದ್ದೆ ಗೆಡುವಂತೆ ಮಾಡುವುದೇ ನಿಜವಾದ ಕನಸು."
"ಧೈರ್ಯದಿಂದ ಎದುರಿಸುವ ಮನಸ್ಸು ಬಂದಾಗಲೇ ನೀವು ಅರ್ಧ ಗೆದ್ದಂತೆ"
"ಶಿಕ್ಷಣ ಎಂಬುದು ಹುಲಿ ಹಾಲಿದ್ದಂತೆ,
ಕುಡಿದವನು ಘರ್ಜಿಸಲೇಬೇಕು."
"ಬರೆದಿಟ್ಟಂತೆ ಜೀವನ ಮಾಡಲು ಯಾರಿಗೂ ಸಾಧ್ಯವಿಲ್ಲ,
ಆದರೆ ಬರೆದಿಡುವಂತಹ ಜೀವನ ಮಾಡಲು ಸಾಧ್ಯವಿದೆ."
"ಬಡವನಾಗಿ ಹುಟ್ಟುವುದು ನಿನ್ನ ತಪ್ಪಲ್ಲ,
ಬಡವನಾಗಿ ಸಾಯುವುದು ನಿನ್ನ ತಪ್ಪು."
"ಕೊಂಬೆ ಮೇಲೆ ಕುಳಿತ ಹಕ್ಕಿ ನಂಬಿರುವುದು ಬಲವಾದ ಕೊಂಬೆಯನ್ನಲ್ಲ,
ತನ್ನ ಪುಟ್ಟ ರೆಕ್ಕೆಯನ್ನು!!"
"ಕಲ್ಲು ಉಳಿಯ ಏಟು ತಿನ್ನದಿದ್ದರೆ ಅದು ಬರೆ ಕಲ್ಲು,
ಅದು ಉಳಿಯ ಏಟು ತಿಂದರೆ ಅದೊಂದು ಮೂರ್ತಿ."
"ಸೋತೆ ಎಂದು ನೀ ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಏಕೆಂದರೆ ಯಾರಿಗೆ ಗೊತ್ತು
ಆ ಹೆಜ್ಜೆ ನಿನ್ನ ಇತಿಹಾಸವನ್ನೇ ಸೃಷ್ಟಿ ಮಾಡುವ ಹೆಜ್ಜೆಯಾಗಿರಬಹುದು."
"ಸುಲಭವಾಗಿ ಪಡೆದದ್ದು ಬೇಗ ಕಳೆದುಕೊಳ್ಳುತ್ತೇವೆ.
ಆದರೆ ಶ್ರಮದಿಂದ ನಿಧಾನವಾಗಿ ಪಡೆದಿದ್ದು ದೀರ್ಘಕಾಲ ಉಳಿಯುತ್ತದೆ."
"ಯಾವುದೇ ಕೆಲಸವನ್ನು ಶ್ರದ್ದೆಯಿಂಂದ ಮಾಡು,
ಫಲದ ಬಗ್ಗೆ ಚಿಂತಿಸಬೇಡ, ಫಲ ಬಂದೇ ಬರುತ್ತದೆ."
No comments:
Post a Comment